ತೊರವಿ ನರಸಿಂಹನ ಸನ್ನಿಧಾನದಲ್ಲಿ ಮಹಾರುದ್ರ ಹೋಮ > ಸಚಿವ ದ್ವಯರು ಭಾಗಿ36 ಲಕ್ಷ ಗಾಯತ್ರಿ ಜಪ ಸಮರೆ್ಣ
ವಿಜಯಪುರ 22 : ತೊರವಿ ನರಸಿಂಹದೇವರ ಸನ್ನಿಧಾನದಲ್ಲಿ ಕರ್ನಾಟಕ ರಾಜ್ಯ ಬ್ರಾಹ್ಮಣ ಕ್ಷೇಮಾಭಿವೃದ್ಧಿ ಸಂದಿಂದ ಹಮ್ಮಿಕೊಂಡಿದ್ದ ಗಾಯತ್ರಿ ಜಪ ಯಜ್ಞ ಹಾಗೂ ಮಹಾ ರುದ್ರ ಹೋಮದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ ಭಕ್ತರು ಜಪಿಸಿದ 36 ಲಕ್ಷ ಗಾಯತ್ರಿ ಮಂತ್ರವನ್ನು ಶನಿವಾರ ಭಗವಂತನಿಗೆ ಸಮರ್ಿಸಲಾಯಿತು.ಅತ್ಯಂತ ಪ್ರಭಾವಶಾಲಿ, ಪರಮ ಪವಿತ್ರ ಮತ್ತು ಚತುರ್ವೇದ ಸಾರವಾಗಿರುವ ಗಾಯತ್ರಿ ಮಂತ್ರ ನಿತ್ಯ ಪಠಣದಿಂದ ಏಕಾಗ್ರತೆ, ಸ್ಮರಣಶಕ್ತಿ ವೃದ್ಧಿ, ಆತ್ಮಸ್ಥ್ಗೆರ್ಯ ಹೆಚ್ಚುತ್ತದೆ. ಜೀವನದಲ್ಲಿ ಉತ್ಸಾಹ, ದೇಹದಲ್ಲಿ ಚೈತನ್ಯ, ಮುಖದಲ್ಲಿ ತೇಜಸ್ಸು ಮೂಡುತ್ತದೆ. ಕ್ರೋಧ ನಿಯಂತ್ರಿಸಿ ಮಾನಸಿಕ ಶಾಂತಿ, ನೆಮ್ಮದಿ ಮತ್ತು ಉತ್ತಮ ಆರೋಗ್ಯ ಲಭಿಸುತ್ತದೆ. ದಾರಿ ತಪ್ಗು??ತ್ತಿರುವ ಯುವ ಜನತೆಯನ್ನು ಸನ್ಮಾರ್ಗದತ್ತ ತರುವ ಪ್ರಯತ್ನವಾಗಿ ಈ ಕಾರ್ಯಕ್ರಮ ಹಮ್ಮ್ಮಿಕೊಳ್ಳಲಾಗಿತ್ತು. ಭಕ್ತರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.ಶನಿವಾರ ಬೆಳಗ್ಗೆ 8ಕ್ಕೆ ಮಹಾರುದ್ರಹೋಮ ಪ್ರಾರಂಭವಾಯಿತು. 11ಜನ ಋತ್ವಿಜರು ಹೋಮದ ನೇತೃತ್ವ ವಹಿಸಿದ್ದರು. ಹಿರಿಯ ವಿದ್ವಾಂಸ ಪಂ.ಮಧ್ವಾಚಾರ್ಯ ಮೊಕಾಶಿ ನೇತೃವದಲ್ಲಿ ನಡೆದ ಗಾಯತ್ರಿ ಜಪ ಯಜ್ಞದಲ್ಲ್ಲಿ 22 ಜನ ಋತ್ವಿಜರು ಪಾಲ್ಗೊಂಡಿದ್ದರು. ಮಹಿಳೆಯರು ಪಠಿಸಿದ 14 ಲಕ್ಷ ಕೃಷ್ಣ ಜಪ ನರಸಿಂಹ ದೇವರಿಗೆ ಸಮರ್ಿಸಲಾಯಿತು.ಪಂ.ವೇದನಿಧಿ ಆಚಾರ್ಯ, ಶ್ರಿಕಾಂತಾಚಾರ್ಯ ಆಶ್ರಿತ, ಕೃಷ್ಣಾಚಾರ್ಯ ಗಲಗಲಿ, ಸುಧನ್ವ ಸಂಗಮ, ತೊರವಿ ನರಸಿಂಹ ದೇವಸ್ಥಾನ ಸಮಿತಿ ಅಧ್ಯಕ್ಷ ರಾವೇಂದ್ರ ಕುಲಕರ್ಣಿ, ಉಪಾಧ್ಯಕ್ಷ ಶಶಿಕಾಂತ ಜೋಶಿ, ಕಾರ್ಯದರ್ಶಿ ಸಂತೋಷ ಕುಲಕರ್ಣಿ ಹಾಗೂ ವಿಪ್ರ ಸಮಾಜದ ಪ್ರಮುಖರಾದ ಉಲ್ಲಾಸ ಪಾಟೀಲ್, ಎಸ್.ಎಂ.ದೇಸಾಯಿ, ವಿದ್ಯಾಕುಲಕರ್ಣಿ, ಚೈತ್ರಾ ಗೊರಟೆಕರ,ಆನಂದ ಕುಲಕರ್ಣಿ, ಪ್ರದಿಪ ಕುಲಕರ್ಣಿ, ರಮೇಶ ನಾಮಣ್ಣವರ, ಪವನ ಗಲಗಲಿ, ಸಂದೀಪ ಕುಲಕರ್ಣಿ, ಕೆ.ಬಿ.ಕುಲಕರ್ಣಿ, ರಾಜೇಂದ್ರ ಜೋಶಿ, ಸುಧೀಂದ್ರ ಜೋಶಿ,ಗೋವಿಂದ ದೇಶಪಾಂಡೆ, ಪ್ರಹ್ಲಾದ ಕುಲಕರ್ಣಿ, ವಿಜಯ ಜೋಶಿ, ಅನಂತ ಕುಲಕರ್ಣಿ, ಅಂಬಾದಾಸ ಜೋಶಿ ಹಾಗೂ ಭಕ್ತರು ಪಾಲ್ಗೊಂಡಿದ್ದರು.*ಬಾಕ್ಸ್‌ನರಸಿಂಹನ ದರ್ಶನ ಪಡೆದ ಸಚಿವರುಬೃಹತ್ ಕೈಗಾರಿಕೆ ಸಚಿವ ಎಂಬಿ. ಪಾಟೀಲ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ ಗುಂಡುರಾವ ಅವರು ತೊರವಿ ಕ್ಷೇತ್ರಕ್ಕೆ ಭೇಟಿ ನೀಡಿ ನರಸಿಂಹ ದೇವರ ದರ್ಶನ ಪಡೆದುಕೊಂಡರು. ನಂತರ ಹೋಮದಲ್ಲಿ ಭಾಗಿಯಾಗಿದ್ದರು.ಮಂದಿರದ ಪಾಕಿಂರ್ಗ್ ಸ್ಥಳ ಅಭಿವೃದ್ಧಿ ಪಡಿಸುವಂತೆ ನರಸಿಂಹ ಸ್ವಾಮಿ ದೇವಸ್ಥಾನ ಸಮಿತಿ ಮುಖಂಡರು ಸಚಿವ ಎಂ.ಬಿ.ಪಾಟೀಲ್‌ರಲ್ಲಿ ಮನವಿ ಮಾಡಿದರು. ಪಾಕಿಂರ್ಗ್ ಜಾಗದಲ್ಲಿ ಸುತ್ತುಗೋಡೆ ನಿರ್ಮಿಸಿಕೊಡಲಾಗುವುದು ಎಂದು ಸಚಿವರು ಭರವಸೆ ನೀಡಿದರು. ಸಚಿವ ದ್ವಯರನ್ನು ಸಮಿತಿಯಿಂದ ಸನ್ಮಾನಿಸಲಾಯಿತು.*ಬಾಕ್ಸ್‌ಇಂದಿನ ಕಾರ್ಯಕ್ರಮ23ರಂದು ಬೆಳಗ್ಗೆ 8ಕ್ಕೆ ಗಾಯತ್ರಿ ಜಪ ಯಜ್ಞ ಪೂರ್ಣಾಹುತಿ. 9ಕ್ಕೆ ಮಹಾರುದ್ರ ಹೋಮದ ಪೂರ್ಣಾಹುತಿ, 11.30ಕ್ಕೆ ಶ್ರೀ ಲಕ್ಷ್ಗಿ?? ನರಸಿಂಹ ದೇವರ ರಥೋತ್ಸವ ನಂತರ ದಾನಿಗಳಿಗೆ ಸನ್ಮಾನ ಸಮಾರಂಭ, ಮಧ್ಯಾಹ್ನ 1.30ಕ್ಕೆ ಸಾಮೂಹಿಕ ತೀರ್ಥ ಪ್ರಸಾದದ ವ್ಯವಸ್ಥೆ ಮಾಡಲಾಗಿದೆ.ಖಜಠಿಟಥಿಈಠತಿಚಿಡಿಜಂಜಜ ಡಿಜಚಿಛಿಣಠ